Tuesday, July 1, 2008

ಅದಕೆಂದೇ...

ಏಕಾಂತದ ನಗರಿಯಲ್ಲೊಂದು ಮನೆಯ ಕಟ್ಟಿಕೊಂಡೆ
ಅವಹೇಳನಗಳನ್ನೆಲ್ಲ ಹಣೆಬರಹವಾಗಿಸಿಕೊಂಡೆ

ಕಲ್ಲ ಪೂಜಿಸುವುದ ಕಂಡೆ ಜಗದಲಿ ಅದಕೆಂದೇ
ನನ್ನ ಮನಸನ್ನೂ ಕಲ್ಲಾಗಿಸಿಕೊಂಡೆ..


(Translated from a Urdu ashaar)
ಭಾವನೆ

ನನ್ನ ಧೈರ್ಯಕೆ
ತಲೆಬಾಗಿ
ಬಿರುಗಾಳಿ
ಸುತ್ತು ತಿರುಗುತಿದೆ

ಲೋಕದ ದೃಷ್ಟಿಯಲಿ
ನನ್ನ ಹಡಗು ಸುಳಿಯಲ್ಲಿ
ಸಿಲುಕಿ ಮುಳುಗುತಿದೆ


(Translated from a Urdu ashaar)
ನನ್ನವಳು

ಕೆಲವೊಮ್ಮೆ
ಮುಟ್ಟಿದರೆ ಮುನಿ...
ಕೆಲವೊಮ್ಮೆ
ಮುತ್ತಿಡದಿದ್ದರೆ ಮುನಿ ...

Friday, June 13, 2008

ಆಷಾಢ...

ನೀಲಿ ಒಂಟಿ ಆಕಾಶ
ಬಹುಶಃ ಆಗಸಕ್ಕದು ಆಷಾಢ..
ದೂರದೂರಿನ ನಲ್ಲೆ
ಪತ್ರದಲಿ ಕಳುಹಿದ
ಶುಭ್ರ ಮುತ್ತುಗಳು...
ಅಲ್ಲಿ ಬರಿ ನಿಟ್ಟುಸಿರು..
ವಿರಹದ ತಾಪ..

Saturday, March 8, 2008

ನೀನಿಲ್ಲ:

ಮರಳಿ ಬಂದಾಗ ಮನೆಗೆ
ಬಾಗಿಲೊಳು ನೀನಿಲ್ಲ.

ಹುಡುಕುತಿರೆ ಕಣ್ಣು
ಮನೆಯೊಳಗೆ ನೀನಿಲ್ಲ.

ಕಣ್ಣ ಮುಚ್ಚಿ
ತೋಳ ಚಾಚಿದರೆ
ಬರಿಯ ಬಿಸಿ ಉಸಿರು,

ತೋಳಿನೊಳು

ನೀನಿಲ್ಲ.

ನೀನಿಲ್ಲ....
ಅಲೆ..

ಮೊದಲು
ದೂರದ ಊರಿನ
ನನ್ನ ಹುಡುಗಿ
ಆಗೊಮ್ಮೆ ಈಗೊಮ್ಮೆಯ ಸುನಾಮಿ ಅಲೆ.

ಮದುವೆಯ ನಂತರ
ದಂಡೆಯ ತನ್ನೊಳಗೆ
ಸೆಳೆದುಕೊಳ್ಳುವ ಸಣ್ಣ ಅಲೆ...